BBMP Directs Action on Expired Lease Properties
Press Release Bengaluru Central City Corporation Bengaluru, January 5 The Commissioner of Bengaluru Central City Corporation, Rajendra Cholan , has directed officials to take possession of all civic properties where the lease period has exp…

Press Release
Bengaluru Central City Corporation
Bengaluru, January 5
The Commissioner of Bengaluru Central City Corporation, Rajendra Cholan, has directed officials to take possession of all civic properties where the lease period has expired.
Revenue officials have been instructed to prepare a complete list of leased properties and issue notices to concerned individuals and institutions. A 15-day time period has been given to respond, failing which the properties will be reclaimed by the Corporation.
The Commissioner also directed:
- Renewal of leases based on revised lease rates where applicable
- Renovation of Corporation offices for better public service
- Construction of residential quarters for officials and staff on vacant civic land
- Development of commercial buildings on suitable vacant properties to increase revenue
- Strict action against misuse of leased civic land for unauthorised commercial activities
The meeting was attended by senior officials of Bruhat Bengaluru Mahanagara Palike and the Revenue Department.






Kannada Version
ಬೆಂಗಳೂರು ಕೇಂದ್ರ ನಗರ ಪಾಲಿಕೆ
ಬೆಂಗಳೂರು, ಜನವರಿ-5
*ಗುತ್ತಿಗೆ ಅವಧಿ ಮುಕ್ತಾಯಗೊಂಡಿರುವ ಆಸ್ತಿಗಳನ್ನು ನಗರ ಪಾಲಿಕೆ ವಶಕ್ಕೆ ಪಡೆಯಿರಿ: ರಾಜೇಂದ್ರ ಚೋಳನ್*
ಗುತ್ತಿಗೆ (ಲೀಸ್) ಅವಧಿ ಮುಕ್ತಾಯಗೊಂಡ ಆಸ್ತಿಗಳಿಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲು ಕ್ರಮ ವಹಿಸಿ
*ಹೊಸ ಗುತ್ತಿಗೆ ದರದ ಅನ್ವಯ ಗುತ್ತಿಗೆ ಶುಲ್ಕ ನಿಗದಿಯೊಂದಿಗೆ ಜಾಗದ ಗುತ್ತಿಗೆ ಅವಧಿಯನ್ನು ನವೀಕರಿಸಲು ಸೂಚನೆ:*
ಖಾಲಿ ಇರುವ ನಗರ ಪಾಲಿಕೆ ಜಾಗಗಳಲ್ಲಿ ನಗರ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ನಿರ್ಮಿಸಲು ಕ್ರಮ ವಹಿಸಲು ಸೂಚನೆ
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಸೇರಿದ ಸ್ವತ್ತುಗಳನ್ನು ಗುತ್ತಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ, ಸಂಘ-ಸಂಸ್ಥೆಗಳಿಗೆ ಇನ್ನಿತರೆ ಉಪಯೋಗಕ್ಕಾಗಿ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಎಲ್ಲಾ ಆಸ್ತಿಗಳ ಪಟ್ಟಿ ಮಾಡಲು ಸೂಚಿಸಿದರು. ಗುತ್ತಿಗೆ ನೀಡಲಾದ ಜಾಗಗಳ ಪೈಕಿ ಗುತ್ತಿಗೆ ಅವಧಿ ಮುಕ್ತಾಯಗೊಂಡ ಪ್ರಕರಣಗಳಲ್ಲಿ ಅಂತಹ ಸ್ವತ್ತು ಗುತ್ತಿಗೆ ಪಡೆದ ಸಂಘ-ಸಂಸ್ಥೆ/ ಸಾರ್ವಜನಿಕರಿಗೆ ನೋಟಿಸ್ ಜಾರಿ ಮಾಡಲು ಹಾಗೂ ಇದಕ್ಕೆ ಪ್ರತ್ಯತ್ತರಕ್ಕಾಗಿ 15 ದಿನಗಳ ಕಾಲಾವಕಾಶ ನೀಡಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು. 15 ದಿನದೊಳಗಾಗಿ ನೋಟಿಸ್ ಗೆ ಯಾವುದೇ ರೀತಿಯ ಉತ್ತರ ಬಾರದಿದ್ದಲ್ಲಿ ಅಂತಹ ಸ್ವತ್ತುಗಳನ್ನು ನಗರ ಪಾಲಿಕೆ ವಶಕ್ಕೆ ಪಡೆದುಕೊಳ್ಳಲು ಆಯುಕ್ತರು ಸೂಚಿಸಿದರು.
ನಗರ ಪಾಲಿಕೆ ಕಛೇರಿಗಳ ನವೀಕರಣಕ್ಕೆ ಸೂಚನೆ:
ದುರಸ್ಥಿಯಲ್ಲಿರುವ ನಗರ ಪಾಲಿಕೆಯ ಕಛೇರಿಗಳನ್ನು ನವೀಕರಣಗೊಳಿಸಿ ಸುಸ್ಥಿತಿಯಲ್ಲಿರಿಸಲು ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದೈನಂದಿನ ಕಾರ್ಯನಿರ್ವಹಣೆಗೆ ಅನುಕೂಲವಾಗಲು ಹಾಗೂ ಸಾರ್ವಜನಿಕರ ಕೆಲಸಕಾರ್ಯಗಳಿಗೆ ಅನುವಾಗುವಂತೆ ಅಗತ್ಯ ಪೀಠೋಪಕರಣಗಳನ್ನು ಅಳವಡಿಸಿಕೊಳ್ಳಲು ಸೂಚನೆ:
*ಖಾಲಿ ಜಾಗಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ನಿರ್ಮಿಸಿ:*
ಬೆಂಗಳೂರು ಕೇಂದ್ರ ನಗರ ಪಾಲಿಕೆ ಸೇರಿದ ಖಾಲಿ ಸ್ವತ್ತುಗಳನ್ನು ಗುರುತಿಸಿ, ಅಂತಹ ಸ್ಥಳಗಳಲ್ಲಿ ನಗರ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಾಸಕ್ಕೆ ಅನುಕೂಲವಾಗುವಂತೆ ವಸತಿ ಗೃಹಗಳನ್ನು ನಿರ್ಮಿಸಲು ಕ್ರಮ ವಹಿಸಲು ಸೂಚನೆ ನೀಡಿದರು.
**ಖಾಲಿ ಜಾಗದಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣಕ್ಕೆ ಕ್ರಮ ವಹಿಸಿ:
**ಕೇಂದ್ರ ನಗರ ಪಾಲಿಕೆಗೆ ಸೇರಿದ ಖಾಲಿ ಸ್ವತ್ತುಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸಿದ್ದಲ್ಲಿ ಇದರಿಂದ ನಗರ ಪಾಲಿಕೆಗೆ ಕಂದಾಯ ಬರುವುದರಿಂದ ಈ ನಿಟ್ಟಿನಲ್ಲಿ ಕ್ರಮ ವಹಿಸಲು ಸೂಚಿಸಿದರು.
*ಅನಧಿಕೃತವಾಗಿ ಅನ್ಯ ಉದ್ದೇಶಕ್ಕಾಗಿ ಗುತ್ತಿಗೆ ಜಾಗವನ್ನು ಉಪಯೋಗಿಸುತ್ತಿರುವ ಸಂಸ್ಥೆಯ ವಿರುದ್ಧ ಕ್ರಮ:*
ನಗರ ಪಾಲಿಕೆ ವತಿಯಿಂದ ಗುತ್ತಿಗೆ ಪಡೆದ ಜಾಗದಲ್ಲಿ ಯಾವ ಉದ್ದೇಶಕ್ಕಾಗಿ ಗುತ್ತಿಗೆ ಪಡೆದಿದ್ದಾರೆಯೋ ಅದನ್ನು ಹೊರತುಪಡಿಸಿ ಬೇರೆ ರೀತಿಯಲ್ಲಿ ಇನ್ನಿತರೆ ವಾಣಿಜ್ಯ ಚಟುವಟಿಕೆಗಳಿಗೆ ಉಪಯೋಗಿಸುತ್ತಿದ್ದಲ್ಲಿ ಅಂತಹ ಗುತ್ತಿಗೆ ಜಾಗ ಪಡೆದ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ ಕ್ರಮ ವಹಿಸಲು ಸೂಚಿಸಿದರು.
ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಕಂದಾಯ ಅಪರ ಆಯುಕ್ತರಾದ ಕೆ. ರಂಗನಾಥ್, ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು ಹಾಜರಿದ್ದರು.


